Telegram Join My Telegram WhatsApp Join My WhatsApp

Agriculture University Degree Admission ಕೃಷಿ ವಿವಿ ಪದವಿ ಪ್ರವೇಶಾತಿ: ಕೃಷಿಕರ ಕೋಟಾದಡಿ ಸೀಟು ಪಡೆಯಲು ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ 2026-27ನೇ ಸಾಲಿನ ಸ್ನಾತಕ ಪದವಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ಕೃಷಿಕರ ಕೋಟಾದಡಿ ಲಭ್ಯವಿರುವ ಶೇ. 50ರಷ್ಟು ಮೀಸಲಾತಿ ಸೀಟುಗಳಿಗಾಗಿ ಪ್ರಾಯೋಗಿಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಪ್ರಮುಖ ದಿನಾಂಕಗಳು (Schedule):

  • ದಾಖಲೆಗಳನ್ನು ಅಪ್‌ಲೋಡ್ ಮಾಡಲು ಆರಂಭ: 11-04-2026 (ಸಂಜೆ 4:00 ರಿಂದ)

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-04-2026 (ರಾತ್ರಿ 11:59 ರವರೆಗೆ)

  • ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 25-04-2026

  • ಪ್ರವೇಶ ಪತ್ರ (Hall Ticket) ಡೌನ್‌ಲೋಡ್: 26-04-2026 ರಿಂದ 29-04-2026ರ ಬೆಳಗ್ಗೆ 7:00 ರವರೆಗೆ.

  • ಪ್ರಾಯೋಗಿಕ ಪರೀಕ್ಷೆ ನಡೆಯುವ ದಿನಾಂಕ: 29-04-2026 (ಬೆಳಿಗ್ಗೆ 9:00 ಗಂಟೆಗೆ)

  • ಪರೀಕ್ಷಾ ಫಲಿತಾಂಶ ಪ್ರಕಟಣೆ: 05-05-2026 (ಬೆಳಿಗ್ಗೆ 11:00 ಗಂಟೆಯ ನಂತರ)

ಅಗತ್ಯವಿರುವ ಮುಖ್ಯ ದಾಖಲೆಗಳು:

ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಜಾಲತಾಣದಲ್ಲಿ ಈ ಕೆಳಗಿನ ದಾಖಲೆಗಳನ್ನು ಆನ್‌ಲೈನ್ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು:

  1. ಕೃಷಿಕರ ಪ್ರಮಾಣ ಪತ್ರ: ಕಂದಾಯ ಇಲಾಖೆಯಿಂದ ಪಡೆದ RD ಸಂಖ್ಯೆ ಹೊಂದಿರುವ ಪತ್ರ.

  2. ವಂಶವೃಕ್ಷ ಪ್ರಮಾಣ ಪತ್ರ: ಕೇವಲ ಅವಿಭಕ್ತ ಕುಟುಂಬದ ಅಭ್ಯರ್ಥಿಗಳಿಗೆ ಮಾತ್ರ.

  3. ಅಫಿಡವಿಟ್-1: ಆದಾಯದ ಮೂಲ ಕೇವಲ ಕೃಷಿಯಾಗಿದ್ದರೆ 100 ರೂ. ಛಾಪಾ ಕಾಗದದ ಮೇಲೆ ಸಲ್ಲಿಸಬೇಕು.

  4. ಅಫಿಡವಿಟ್-2: ಕೃಷಿಯೊಂದಿಗೆ ವೇತನ ಅಥವಾ ವ್ಯವಹಾರದ ಆದಾಯವಿದ್ದರೆ ಇದನ್ನು ಸಲ್ಲಿಸಬೇಕು. (ಇಲ್ಲಿಯೂ ಕೃಷಿ ಆದಾಯವೇ ಪ್ರಧಾನವಾಗಿರಬೇಕು).

  5. ಆದಾಯ ದೃಢೀಕರಣ: ಪೋಷಕರು ನೌಕರಿಯಲ್ಲಿದ್ದರೆ ವೇತನ ಪತ್ರ ಅಥವಾ ಸ್ವಂತ ಉದ್ದಿಮೆ ಹೊಂದಿದ್ದರೆ ಅದರ ವಿವರ ನೀಡಬೇಕು.

ಗಮನಿಸಬೇಕಾದ ಅಂಶಗಳು:

  • ಶುಲ್ಕ: ಸಾಮಾನ್ಯ ಮತ್ತು ಇತರ ವರ್ಗದವರಿಗೆ ರೂ. 1200/- ಹಾಗೂ SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 600/- ನಿಗದಿಪಡಿಸಲಾಗಿದೆ.

  • ಮಾನ್ಯತೆ: ಎಲ್ಲಾ ಪ್ರಮಾಣ ಪತ್ರಗಳು ಏಪ್ರಿಲ್ 2025 ರಿಂದ ಮಾರ್ಚ್ 2026 ರ ಅವಧಿಯೊಳಗೆ ಪಡೆದದ್ದಾಗಿರಬೇಕು.

  • ಪರೀಕ್ಷೆ: ರಾಜ್ಯದ ಒಟ್ಟು 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 8:00 ಗಂಟೆಗೆ ಹಾಜರಿರಬೇಕು. ತಡವಾಗಿ ಬಂದವರಿಗೆ ಅವಕಾಶವಿರುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ ಕೆ.ಇ.ಎ ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ ಕೃಷಿ ವಿವಿ ವೆಬ್‌ಸೈಟ್ www.uasbangalore.edu.in ಗೆ ಭೇಟಿ ನೀಡಬಹುದು.

ಈ ಪುಟಗಳನ್ನು ಓದಿ……

CET-2026 ಪ್ರವೇಶ ಪತ್ರ ಬಿಡುಗಡೆ: ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೇರ ಲಿಂಕ್‌ ಮತ್ತು ಸಂಪೂರ್ಣ ಮಾಹಿತಿ

 

ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಮತ್ತು ಪ್ರಸಾದ ನಿಲಯ: 5 ರಿಂದ 9ನೇ ತರಗತಿ ಬಾಲಕರ ಪ್ರವೇಶಕ್ಕೆ ಅರ್ಜಿ ಆಹ್ವಾನ

 

Leave a Comment