Telegram Join My Telegram WhatsApp Join My WhatsApp

KEA Recruitment 2026: ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳ ನೇಮಕಾತಿ! ಅರ್ಜಿ ಸಲ್ಲಿಕೆ ಆರಂಭ, ಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತೋಟಗಾರಿಕೆ ಇಲಾಖೆಯ ಉಳಿಕೆ ಮೂಲ ವೃಂದದ (RPC) ಗ್ರೂಪ್-ಬಿ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಹಾಗೂ ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಹುದ್ದೆಯ ಹೆಸರುಒಟ್ಟು ಹುದ್ದೆಗಳುವೇತನ ಶ್ರೇಣಿ (ರೂ.ಗಳಲ್ಲಿ)
ಸಹಾಯಕ ತೋಟಗಾರಿಕೆ ಅಧಿಕಾರಿ (AHO)75₹65,950 – ₹1,24,900
ಸಹಾಯಕ ತೋಟಗಾರಿಕೆ ನಿರ್ದೇಶಕರು (AHD)05₹69,250 – ₹1,34,200
ಒಟ್ಟು ಹುದ್ದೆಗಳು80

 

KEA Recruitment 2026: ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳ ನೇಮಕಾತಿ! ಅರ್ಜಿ ಸಲ್ಲಿಕೆ ಆರಂಭ, ಪೂರ್ಣ ವಿವರ ಇಲ್ಲಿದೆ

ಶೈಕ್ಷಣಿಕ ವಿದ್ಯಾರ್ಹತೆ:

  1. ಸಹಾಯಕ ತೋಟಗಾರಿಕೆ ಅಧಿಕಾರಿ: ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿತವಾದ ಹಾಗೂ ICAR ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೋಟಗಾರಿಕೆ ಪದವಿ (B.Sc. Horticulture) ಹೊಂದಿರಬೇಕು.

  2. ಸಹಾಯಕ ತೋಟಗಾರಿಕೆ ನಿರ್ದೇಶಕರು: ICAR ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc. Horticulture ಜೊತೆಗೆ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ (M.Sc. Horticulture) ಹೊಂದಿರಬೇಕು.

(ಗಮನಿಸಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಅಂಕಪಟ್ಟಿ/ಪ್ರಮಾಣಪತ್ರ ಹೊಂದಿರಬೇಕು. ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಅವಕಾಶವಿಲ್ಲ

ವಯೋಮಿತಿ ವಿವರ (0.1 ಬಾರಿಯ 5 ವರ್ಷಗಳ ಸಡಿಲಿಕೆ ಸೇರಿ):

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ ಕೆಳಗಿನಂತಿದೆ:

  • ಸಾಮಾನ್ಯ ಅರ್ಹತೆ (GM): 40 ವರ್ಷಗಳು

  • ಪ್ರವರ್ಗ 2ಎ, 2ಬಿ, 3ಎ, 3ಬಿ: 43 ವರ್ಷಗಳು

  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1: 45 ವರ್ಷಗಳು

  • (ಮಾಜಿ ಸೈನಿಕರು, ವಿಶೇಷಚೇತನರು ಹಾಗೂ ಇತರ ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಸಡಿಲಿಕೆ ಇರುತ್ತದೆ).

ಅರ್ಜಿ ಶುಲ್ಕ ವಿವರ:

  • ಸಾಮಾನ್ಯ ಅರ್ಹತೆ ಮತ್ತು ಇತರ ವರ್ಗಗಳು (GM/2A/2B/3A/3B): ₹750

  • SC / ST / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗಿ: ₹500

  • ವಿಶೇಷ ಚೇತನ ಅಭ್ಯರ್ಥಿಗಳಿಗೆ: ₹250

  • (ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಹುದ್ದೆಗೆ ₹100 ಶುಲ್ಕ ಪಾವತಿಸಬೇಕಾಗುತ್ತದೆ).

ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ:

  • ಸ್ಪರ್ಧಾತ್ಮಕ ಪರೀಕ್ಷೆಯನ್ನು CBT (ಆನ್‌ಲೈನ್) ಅಥವಾ OMR (ಆಫ್‌ಲೈನ್) ಮಾದರಿಯಲ್ಲಿ ನಡೆಸಲಾಗುತ್ತದೆ.

  • ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: SSLC ಅಥವಾ ಉನ್ನತ ಮಟ್ಟದಲ್ಲಿ ಕನ್ನಡ ಅಭ್ಯಾಸ ಮಾಡದ ಅಭ್ಯರ್ಥಿಗಳಿಗೆ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ಇರುತ್ತದೆ (ಕನಿಷ್ಠ 50 ಅಂಕಗಳಿಕೆ ಕಡ್ಡಾಯ).

  • ಸ್ಪರ್ಧಾತ್ಮಕ ಪರೀಕ್ಷೆ:

    • ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಪ್ರಶ್ನೆಗಳು, 300 ಅಂಕಗಳು (2 ಗಂಟೆ ಅವಧಿ).

    • ಪತ್ರಿಕೆ-2 (ನಿರ್ದಿಷ್ಟ ವಿಷಯ): 100 ಪ್ರಶ್ನೆಗಳು, 300 ಅಂಕಗಳು (2 ಗಂಟೆ ಅವಧಿ).

    • ಋಣಾತ್ಮಕ ಮೌಲ್ಯಮಾಪನ: ಪ್ರತಿ ತಪ್ಪು ಉತ್ತರಕ್ಕೆ 0.75 ಅಂಕಗಳನ್ನು ಕಳೆಯಲಾಗುವುದು (Negative Marking).

ಪ್ರಮುಖ ದಿನಾಂಕಗಳು:

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ರಿಲೀಫ್: ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ! ಟಾಟಾ ಕಂಪನಿ ಅರ್ಜಿ ವಾಪಸ್

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ಸಾರ್ವಜನಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿಗೆ ಹೊಸದಾಗಿ “ಪ್ರಜಾಸೇವಾ ಇಲಾಖೆ” ಸ್ಥಾಪನೆ!

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ: SSP ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನ – ಪೂರ್ಣ ಮಾಹಿತಿ ಇಲ್ಲಿದೆ!

Leave a Comment