ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತೋಟಗಾರಿಕೆ ಇಲಾಖೆಯ ಉಳಿಕೆ ಮೂಲ ವೃಂದದ (RPC) ಗ್ರೂಪ್-ಬಿ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಹಾಗೂ ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು | ವೇತನ ಶ್ರೇಣಿ (ರೂ.ಗಳಲ್ಲಿ) |
| ಸಹಾಯಕ ತೋಟಗಾರಿಕೆ ಅಧಿಕಾರಿ (AHO) | 75 | ₹65,950 – ₹1,24,900 |
| ಸಹಾಯಕ ತೋಟಗಾರಿಕೆ ನಿರ್ದೇಶಕರು (AHD) | 05 | ₹69,250 – ₹1,34,200 |
| ಒಟ್ಟು ಹುದ್ದೆಗಳು | 80 | — |
KEA Recruitment 2026: ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳ ನೇಮಕಾತಿ! ಅರ್ಜಿ ಸಲ್ಲಿಕೆ ಆರಂಭ, ಪೂರ್ಣ ವಿವರ ಇಲ್ಲಿದೆ
ಶೈಕ್ಷಣಿಕ ವಿದ್ಯಾರ್ಹತೆ:
ಸಹಾಯಕ ತೋಟಗಾರಿಕೆ ಅಧಿಕಾರಿ: ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿತವಾದ ಹಾಗೂ ICAR ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೋಟಗಾರಿಕೆ ಪದವಿ (B.Sc. Horticulture) ಹೊಂದಿರಬೇಕು.
ಸಹಾಯಕ ತೋಟಗಾರಿಕೆ ನಿರ್ದೇಶಕರು: ICAR ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc. Horticulture ಜೊತೆಗೆ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ (M.Sc. Horticulture) ಹೊಂದಿರಬೇಕು.
(ಗಮನಿಸಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಅಂಕಪಟ್ಟಿ/ಪ್ರಮಾಣಪತ್ರ ಹೊಂದಿರಬೇಕು. ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಅವಕಾಶವಿಲ್ಲ
ವಯೋಮಿತಿ ವಿವರ (0.1 ಬಾರಿಯ 5 ವರ್ಷಗಳ ಸಡಿಲಿಕೆ ಸೇರಿ):
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ ಕೆಳಗಿನಂತಿದೆ:
ಸಾಮಾನ್ಯ ಅರ್ಹತೆ (GM): 40 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ: 43 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1: 45 ವರ್ಷಗಳು
(ಮಾಜಿ ಸೈನಿಕರು, ವಿಶೇಷಚೇತನರು ಹಾಗೂ ಇತರ ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಸಡಿಲಿಕೆ ಇರುತ್ತದೆ).
ಅರ್ಜಿ ಶುಲ್ಕ ವಿವರ:
ಸಾಮಾನ್ಯ ಅರ್ಹತೆ ಮತ್ತು ಇತರ ವರ್ಗಗಳು (GM/2A/2B/3A/3B): ₹750
SC / ST / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗಿ: ₹500
ವಿಶೇಷ ಚೇತನ ಅಭ್ಯರ್ಥಿಗಳಿಗೆ: ₹250
(ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಹುದ್ದೆಗೆ ₹100 ಶುಲ್ಕ ಪಾವತಿಸಬೇಕಾಗುತ್ತದೆ).
ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ:
ಸ್ಪರ್ಧಾತ್ಮಕ ಪರೀಕ್ಷೆಯನ್ನು CBT (ಆನ್ಲೈನ್) ಅಥವಾ OMR (ಆಫ್ಲೈನ್) ಮಾದರಿಯಲ್ಲಿ ನಡೆಸಲಾಗುತ್ತದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: SSLC ಅಥವಾ ಉನ್ನತ ಮಟ್ಟದಲ್ಲಿ ಕನ್ನಡ ಅಭ್ಯಾಸ ಮಾಡದ ಅಭ್ಯರ್ಥಿಗಳಿಗೆ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ಇರುತ್ತದೆ (ಕನಿಷ್ಠ 50 ಅಂಕಗಳಿಕೆ ಕಡ್ಡಾಯ).
ಸ್ಪರ್ಧಾತ್ಮಕ ಪರೀಕ್ಷೆ:
ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಪ್ರಶ್ನೆಗಳು, 300 ಅಂಕಗಳು (2 ಗಂಟೆ ಅವಧಿ).
ಪತ್ರಿಕೆ-2 (ನಿರ್ದಿಷ್ಟ ವಿಷಯ): 100 ಪ್ರಶ್ನೆಗಳು, 300 ಅಂಕಗಳು (2 ಗಂಟೆ ಅವಧಿ).
ಋಣಾತ್ಮಕ ಮೌಲ್ಯಮಾಪನ: ಪ್ರತಿ ತಪ್ಪು ಉತ್ತರಕ್ಕೆ 0.75 ಅಂಕಗಳನ್ನು ಕಳೆಯಲಾಗುವುದು (Negative Marking).
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 05.08.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.08.2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31.08.2026
ಅಧಿಕೃತ ವೆಬ್ಸೈಟ್: cetonline.karnataka.gov.in/kea/
ತೋಟಗಾರಿಗೆ ನೇಮಕಾತಿ-2026 ಆನ್ ಲೈನ್ ಅರ್ಜಿ ಲಿಂಕ್ https://cetonline.karnataka.gov.in/FE_Recr_Ser_ind2026/login
- ತೋಟಗಾರಿಗೆ ನೇಮಕಾತಿ-2026 ವಿವರವಾದ ಅಧಿಸೂಚನೆ ಪಿ ಡಿ ಎಫ್ https://cetonline.karnataka.gov.in/keawebentry456/hortrpc2026/HORT_RPC_NOTIFICATION_05082026kannada.pdf
