Telegram Join My Telegram WhatsApp Join My WhatsApp

ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ: ಅಗತ್ಯ ದಾಖಲೆ ನೀಡದಿದ್ದರೆ ಉಚಿತ ವಿದ್ಯುತ್ ಕಟ್! 91.5 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಯೋಜನೆಯಲ್ಲಿ ಪಾರದರ್ಶಕತೆ ತರಲು ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂಗಳ ಅಧಿಕಾರಿಗಳು ಹಾಗೂ ಮೀಟರ್ ರೀಡರ್‌ಗಳು ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆ ಕಲೆಹಾಕುತ್ತಿದ್ದು, ಒಂದು ವೇಳೆ ಗ್ರಾಹಕರು ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡಲು ನಿರಾಕರಿಸಿದರೆ ಯೋಜನೆಯ ಸೌಲಭ್ಯ ಸ್ಥಗಿತಗೊಳ್ಳಲಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಒಟ್ಟು 1,65,32,652 ಗೃಹ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಗಸ್ಟ್ 2 ರ ವೇಳೆಗೆ 91,50,081 ಮನೆಗಳ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಇನ್ನುಳಿದ 73,82,571 ಮನೆಗಳ ಮಾಹಿತಿ ಸಂಗ್ರಹ ಕಾರ್ಯ ಬಾಕಿ ಇದೆ.

ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ: ಅಗತ್ಯ ದಾಖಲೆ ನೀಡದಿದ್ದರೆ ಉಚಿತ ವಿದ್ಯುತ್ ಕಟ್! 91.5 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ

ದಾಖಲೆ ನಿರಾಕರಿಸಿದರೆ ಪಟ್ಟಿಯಿಂದ ಹೊರಗೆ!

ಮನೆ-ಮನೆ ಸಮೀಕ್ಷೆಯ ಮುಖ್ಯ ಉದ್ದೇಶ ಯೋಜನೆಯ ಫಲಾನುಭವಿಗಳ ವಿವರಗಳನ್ನು ನವೀಕರಿಸುವುದು ಮತ್ತು ಯೋಜನೆಯ ಲಾಭ ಸರಿಯಾದ ಅರ್ಹ ಗ್ರಾಹಕರಿಗೆ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸಮೀಕ್ಷೆ ವೇಳೆ ಗ್ರಾಹಕರು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ, ಅಂತಹ ಕುಟುಂಬಗಳು ಯೋಜನೆಯ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಆದರೆ, ಮೊದಲ ಭೇಟಿಯಲ್ಲಿ ಮನೆಗೆ ಬೀಗ ಹಾಕಿದ್ದರೆ ಅಥವಾ ಗ್ರಾಹಕರು ಸಿಗದಿದ್ದರೆ ಮತ್ತೊಮ್ಮೆ ಮನೆಗೆ ಭೇಟಿ ನೀಡುವಂತೆ ಮೀಟರ್ ರೀಡರ್‌ಗಳಿಗೆ ಸೂಚಿಸಲಾಗಿದೆ. “ಯಾವುದೇ ಅರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಟ್ಟಿಲ್ಲ. ಅಂತಿಮ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ಸ್ಪಷ್ಟಪಡಿಸಿದ್ದಾರೆ.

ದಾಖಲೆ ಸಲ್ಲಿಕೆಗೆ ‘ವಿಶೇಷ ಶಿಬಿರ’ಗಳ ಆಯೋಜನೆ:

ಬೆಂಗಳೂರಿನ ವೈಟ್‌ಫೀಲ್ಡ್, ಮಹದೇವಪುರ ಹಾಗೂ ಸರ್ಜಾಪುರ ಸೇರಿದಂತೆ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಮೀಟರ್ ರೀಡರ್‌ಗಳಿಗೆ ಪ್ರವೇಶ ನೀಡದಿರುವ ದೂರುಗಳು ಕೇಳಿಬಂದಿವೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಯಾವುದೇ ಅರ್ಹ ಗ್ರಾಹಕರು ಸೌಲಭ್ಯದಿಂದ ವಂಚಿತರಾಗದಂತೆ ತಡೆಯಲು, ರಾಜ್ಯದ ಎಲ್ಲಾ ಎಸ್ಕಾಂ ಕಚೇರಿಗಳಲ್ಲಿ “ವಿಶೇಷ ಸಮೀಕ್ಷಾ ಶಿಬಿರ” (Special Camps) ಗಳನ್ನು ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ. ಈ ಶಿಬಿರಗಳಲ್ಲಿ ಗ್ರಾಹಕರು ಸ್ವತಃ ಹಾಜರಾಗಿ ತಮ್ಮ ದಾಖಲೆಗಳನ್ನು ಸಲ್ಲಿಸಬಹುದಾಗಿದೆ.

ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಸಮೀಕ್ಷೆಯ ಪ್ರಗತಿ:

ಎಸ್ಕಾಂ ಹೆಸರು (ಪ್ರದೇಶ)ಸಮೀಕ್ಷೆ ಪೂರ್ಣಗೊಂಡ ಮನೆಗಳು
ಬೆಸ್ಕಾಂ (ಬೆಂಗಳೂರು ವ್ಯಾಪ್ತಿ)37,28,114
ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ)22,03,401
ಮೆಸ್ಕಾಂ (ಮಂಗಳೂರು)12,31,289
ಸಿಎಸ್ಇಸಿ (ಮೈಸೂರು)11,09,782
ಜೆಸ್ಕಾಂ (ಕಲಬುರಗಿ)8,50,786
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ26,709
ಈ ಪುಟಗಳನ್ನು ಓದಿ……..

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ: SSP ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನ – ಪೂರ್ಣ ಮಾಹಿತಿ ಇಲ್ಲಿದೆ!

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ರಿಲೀಫ್: ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ! ಟಾಟಾ ಕಂಪನಿ ಅರ್ಜಿ ವಾಪಸ್

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ಸಾರ್ವಜನಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿಗೆ ಹೊಸದಾಗಿ “ಪ್ರಜಾಸೇವಾ ಇಲಾಖೆ” ಸ್ಥಾಪನೆ!

 

Leave a Comment