Telegram Join My Telegram WhatsApp Join My WhatsApp

ರೈತ ಬಾಂಧವರಿಗೆ ಸುವರ್ಣ ಅವಕಾಶ: ನೀವೂ ಆಗಬಹುದು ‘ಸೂಪರ್ ಸ್ಟಾರ್ ರೈತ’; 8ನೇ ವರ್ಷದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ!

ವಿಜಯಪುರ: ರೈತ ಬಾಂಧವರಿಗೆ ಸುವರ್ಣ ಅವಕಾಶ ಜಿಲ್ಲೆಯ ರೈತರ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲು ‘ವಿಜಯ ಕರ್ನಾಟಕ’ ದಿನಪತ್ರಿಕೆಯು 8ನೇ ವರ್ಷದ “ಸೂಪರ್ ಸ್ಟಾರ್ ರೈತ” ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ತಮ್ಮ ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡುತ್ತಿರುವ ರೈತರು ಈ ಗೌರವಕ್ಕೆ ಪಾತ್ರರಾಗಬಹುದು.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಸಾವಯವ ಕೃಷಿ, ಸಹಜ ಕೃಷಿ ಅಥವಾ ಸಮಗ್ರ ಕೃಷಿ ಮಾಡುತ್ತಿರುವವರು.

  • ನೈಸರ್ಗಿಕ ಕೃಷಿ ಸೇರಿದಂತೆ ವಿವಿಧ ಪದ್ಧತಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡುತ್ತಿರುವವರು.

  • ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಜೇನು ಸಾಕಣೆ, ರೇಷ್ಮೆ, ಮೀನುಗಾರಿಕೆ, ಮೊಲ ಅಥವಾ ಕುರಿ ಸಾಕಣೆ ಮಾಡುತ್ತಿರುವ ರೈತರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ? ಅರ್ಜಿ ಸಲ್ಲಿಸುವ ರೈತರು ತಮ್ಮ ಕೃಷಿ ಕುರಿತು ಸಮಗ್ರ ಮಾಹಿತಿ, ಸೂಕ್ತವಾದ ಫೋಟೋಗಳು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಸಾಧಕ ರೈತರ ಬಗ್ಗೆ ಸಾರ್ವಜನಿಕರು ಕೂಡ ಮಾಹಿತಿ ಒದಗಿಸಬಹುದು.

ಕೊನೆಯ ದಿನಾಂಕ ಮತ್ತು ವಿಳಾಸ:

  • ಕೊನೆಯ ದಿನಾಂಕ: ಫೆಬ್ರವರಿ 28, 2026.

  • ಸಲ್ಲಿಸಬೇಕಾದ ದಾಖಲೆ: ಅರ್ಜಿ, ಫೋಟೋ, ವಿಡಿಯೋ ಮತ್ತು ಪೂರಕ ದಾಖಲೆಗಳು.

  • ವಿಳಾಸ: ವಿಜಯ ಕರ್ನಾಟಕ ‘ಸೂಪರ್ ಸ್ಟಾರ್ ರೈತ’ ವಿಭಾಗ, ಪ್ರೇಮಶ್ರೀ ಟವರ್ಸ್, 2ನೇ ಮಹಡಿ, ಎಂ.ಜಿ. ರಸ್ತೆ, ವಿಜಯಪುರ-586101.

  • WhatsApp ಮೂಲಕ ಸಲ್ಲಿಸಲು: 7899874141 ಸಂಖ್ಯೆಗೆ ಮಾಹಿತಿಯನ್ನು ಕಳುಹಿಸಬಹುದು.

ಈ ಪುಟಗಳನ್ನು ಓದಿ…

ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ 2 ಪ್ರಮುಖ ಬ್ಯಾಂಕ್‌ಗಳು! ನಿಮ್ಮ ಸಾಲದ EMI ಇನ್ನು ಮುಂದೆ ಕಡಿಮೆ; ಹೊಸ ದರಗಳು ಇಂದಿನಿಂದಲೇ ಜಾರಿ!

Leave a Comment