Telegram Join My Telegram WhatsApp Join My WhatsApp

School Assistant Recruitment: ಸರ್ಕಾರಿ ಶಾಲೆಗಳಿಗೆ ಸಹಾಯಕ ಸಿಬ್ಬಂದಿ ನೇಮಕ! ಮಾಸಿಕ ₹10,000 ಗೌರವಧನ: 956 ಶಾಲೆಗಳಲ್ಲಿ ಅವಕಾಶ :

ಸರ್ಕಾರಿ ಶಾಲೆಗಳಿಗೆ ಸಹಾಯಕ ಸಿಬ್ಬಂದಿ ನೇಮಕ! ಮಾಸಿಕ ₹10,000 ಗೌರವಧನ: 956 ಶಾಲೆಗಳಲ್ಲಿ ಅವಕಾಶ :

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಲೆಕ್ಕಪತ್ರ, ಆಡಳಿತ ಹಾಗೂ ಶೈಕ್ಷಣಿಕ ಮಾಹಿತಿಗಳ ನಿರ್ವಹಣೆಗಾಗಿ ‘ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರು’ ಹಾಗೂ ‘ಭದ್ರತಾ ಸಿಬ್ಬಂದಿ’ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ರಾಜ್ಯದ ಮುಂಚೂಣಿ 956 ಶಾಲೆಗಳಲ್ಲಿ ಗೌರವಧನ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾಗುವ ಸಿಬ್ಬಂದಿಗೆ ಮಾಸಿಕ ₹10,000 ಗೌರವಧನ ನಿಗದಿಪಡಿಸಲಾಗಿದೆ. ಈ ಕುರಿತು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಕೆ. ವಿದ್ಯುತ್ಕುಮಾರಿ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.

School Assistant Recruitment: ಸರ್ಕಾರಿ ಶಾಲೆಗಳಲ್ಲಿ ಸಹಾಯಕರ ನೇಮಕ! ₹10,000 ವೇತನ: ಯಾರು ಅರ್ಜಿ ಸಲ್ಲಿಸಬಹುದು?

ಯಾವೆಲ್ಲಾ ಶಾಲೆಗಳಲ್ಲಿ ನೇಮಕಾತಿ?

ಹೆಚ್ಚಿನ ವಿದ್ಯಾರ್ಥಿ ದಾಖಲಾತಿ ಹೊಂದಿರುವ ರಾಜ್ಯದ ಪ್ರಮುಖ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದಲೇ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ:

  • ಕರ್ನಾಟಕ ಪಬ್ಲಿಕ್ ಶಾಲೆ (KPS)

  • ಆದರ್ಶ ವಿದ್ಯಾಲಯಗಳು

  • ಪಿಎಂ ಶ್ರೀ (PM-SHRI) ಶಾಲೆಗಳು

ಶಾಲಾ ಸಹಾಯಕರ ಕೆಲಸವೇನು? (Job Role)

  1. ದತ್ತಾಂಶ ನಿರ್ವಹಣೆ: ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ ನಮೂದಿಸುವುದು, ಹಾಜರಾತಿ, ಶೈಕ್ಷಣಿಕ ಸಾಧನೆ ಹಾಗೂ ಇತರ ಮಾಹಿತಿಗಳನ್ನು ನಿಯಮಿತವಾಗಿ ನವೀಕರಿಸುವುದು (Update).

  2. ಪೋರ್ಟಲ್‌ಗಳಲ್ಲಿ ಮಾಹಿತಿ ಅಪ್‌ಲೋಡ್: ವಿವಿಧ ಸರ್ಕಾರಿ ಪೋರ್ಟಲ್‌ಗಳಾದ UDISE+, SATS, LBA ಅಂಕಗಳು, MDMS, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ MIS ವ್ಯವಸ್ಥೆಗಳಿಗೆ ಅಗತ್ಯ ದತ್ತಾಂಶ ಕ್ರೋಢೀಕರಿಸಿ ಅಪ್‌ಲೋಡ್ ಮಾಡುವುದು.

  3. ಡಿಜಿಟಲ್ ಸಹಾಯ: ಮುಖ್ಯಶಿಕ್ಷಕರು ಹಾಗೂ ಶಿಕ್ಷಕರಿಗೆ ಶಾಲಾ ವರದಿ, ಅಂಕಿ-ಅಂಶ ಮತ್ತು ದಾಖಲಾತಿ ನಿರ್ವಹಣೆಯಲ್ಲಿ ನೆರವಾಗುವುದು ಹಾಗೂ ಶಾಲೆಯ ಡಿಜಿಟಲ್ ಮಾಹಿತಿಯನ್ನು ಸುಲಭವಾಗಿ ಸಿಗುವಂತೆ ನಿರ್ವಹಿಸುವುದು.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಹತೆಗಳು:

  • ಆಯ್ಕೆ ಸಮಿತಿ: ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಲು ಮುಖ್ಯಶಿಕ್ಷಕರು/ಪ್ರಾನ್ಸುಪಾಲರು, SDMC, ಹಾಗೂ DDPI ಕಚೇರಿಯ ಕಂಪ್ಯೂಟರ್ ಪ್ರೋಗ್ರಾಮರ್ ಒಳಗೊಂಡ ವಿಶೇಷ ಸಮಿತಿ ರಚಿಸಲಾಗುತ್ತದೆ.

  • ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ (Practical Test) ನಡೆಸಿ, ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.

  • ವೇತನ: ಎರಡೂ ಹುದ್ದೆಗಳಿಗೆ (ದತ್ತಾಂಶ ನಿರ್ವಹಣಾ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿ) ಮಾಸಿಕ ತಲಾ ₹10,000 ಗೌರವಧನ ನೀಡಲಾಗುತ್ತದೆ.

  • ಕೊನೆಯ ದಿನಾಂಕ: ಈ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಆಗಸ್ಟ್ 15ರ ಒಳಗಾಗಿ ಪೂರ್ಣಗೊಳಿಸುವಂತೆ ಎಲ್ಲಾ ಜಿಲ್ಲೆಗಳ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ

ಈ ಪುಟಗಳನ್ನು ಓದಿ…….

Ration Card eKYC Online: ರೇಷನ್ ಕಾರ್ಡ್ e-KYC ಮೊಬೈಲ್‌ನಲ್ಲೇ ಮಾಡಿ! ಸರಳ ಹಂತಗಳು ಇಲ್ಲಿವೆ

ನಿಮ್ಮ ಮನೆ ಬಾಗಿಲಿಗೇ ಬರಲಿದೆ ಸರ್ಕಾರ! ಪ್ರತಿ ಶನಿವಾರ ‘ಪ್ರಜಾಸೇವೆ ಆಂದೋಲನ’: ಸಾರ್ವಜನಿಕರ ಕುಂದುಕೊರತೆ ಪರಿಹಾರಕ್ಕೆ ಹೊಸ ಪ್ಲಾನ್

KEA Recruitment 2026: ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳ ನೇಮಕಾತಿ! ಅರ್ಜಿ ಸಲ್ಲಿಕೆ ಆರಂಭ, ಪೂರ್ಣ ವಿವರ ಇಲ್ಲಿದೆ

Leave a Comment