ಜೀವನದ ಅಂತಿಮ ಉದ್ದೇಶವೇನು, ಅದರ ತಾತ್ಪರ್ಯಗಳ ಬಗ್ಗೆ ವಿಚಾರಿಸಿದಾಗ ನಮ್ಮಲ್ಲೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದುವೇ ಜೀವನದ ಒಂದು ಯಕ್ಷ ಪ್ರಶ್ನೆ?
ಲೇಖಕಕರು- ಶ್ರೀಶೈಲ ಬಿಸಿರೊಟ್ಟಿ
ಜೀವನದ ಅಂತಿಮ ಉದ್ದೇಶವೇನು, ಅದರ ತಾತ್ಪರ್ಯಗಳ ಬಗ್ಗೆ ವಿಚಾರಿಸಿದಾಗ ನಮ್ಮಲ್ಲೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಜೀವನದಲ್ಲಿ ಸಾಧನೆ, ಯಶಸ್ಸು, ಕೀರ್ತಿ, ಸಂಪಾದನೆ, ಇವೆ ನಮ್ಮ ಜೀವನದ ಅಂತಿಮ ಉದ್ದೇಶಗಳೆ?, ಇವುಗಳ ಹಿಂದೆ ಬಿದ್ದವರ ಇತಿಹಾಸದಲ್ಲಿ ಗೆದ್ದವರ ಸಂಖ್ಯೆಗಿಂತ ಸೋತವರ ಸಾವಿರಕಥೆಗಳೆ ಹೆಚ್ಚಾಗಿವೆ. ಒಬ್ಬ ಮನುಷ್ಯನ ಸಾಧನೆಗಳನ್ನು ಅಳೆಯುವ ಮಾನದಂಡಗಳೆ ಇವು? ಜೀವನದ ಪ್ರತಿಯೋಂದು ಹಂತದಲ್ಲು ಯಕ್ಷ ಪ್ರಶ್ನೆಗಳು ಹುಟ್ಟುತ್ತಲೆ ಹೋಗುತ್ತವೆ. ಹೇಗೆ ಪಾಂಡವರ ವನವಾಸದ ಸಮಯದಲ್ಲಿ ಧರ್ಮರಾಜನಿಗೆ ಯಕ್ಷ ಯಾವ ರೀತಿ ಪರೀಕ್ಷೆಗೆ ಒಳಪಡಿಸಿದ್ದನೋ ಹಾಗೆ. ನಾವು ವಿದ್ಯಾರ್ಥೀಗಳಾಗಿದ್ದಾಗ ನಮ್ಮ ಶಾಲೆಯಲ್ಲೆ ಬಾಲ್ಯದಲ್ಲಿ ಪ್ರತಿಭಾವಂತರಾಗಿದ್ದ, ಆಟ, ಪಾಟ ಎಲ್ಲದರಲ್ಲಿ ಮುಂಚುಣಿಯಲ್ಲಿದ್ದ ವಿದ್ಯಾರ್ಥಿಗಳ ಬದುಕು ಒಮ್ಮೆ ಈಗ ಅವಲೋಕಿಸಿದಾಗ? ಮತ್ತು ಅದೇ ಕೊಠಡಿಯ ದಡ್ಡ ವಿದ್ಯಾರ್ಥಿಗಳ ಬದುಕು ಒಮ್ಮೆ ಈಗ ಅವಲೋಕಿಸಿದಾಗ? ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ವಿಯಾಗಲಿಲ್ಲ, ದಡ್ಡ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಇದಕ್ಕೆ ಕಾರಣ ಅವರವರ ಶ್ರಮವೇ?, ಅದೃಷ್ಟವೇ? ಪರಿಶ್ರಮವೆ? ಹಣೆಬರಹವೆ? ಕಾರ್ಯಕ್ಷಮತೆಯೆ?
ಜೀವನದಲ್ಲಿ ಹಿಂತಹ ಎಷ್ಟೋ ಘಟನೆಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ನೋಡುತ್ತಲೆ ಇರುವತ್ತೆವೆ, ವೃದ್ದಾಪ್ಯದಲ್ಲಿ ಮರಣ ಹೊಂದದೆ ದಿನನಿತ್ಯ ನರಳಾಡುವ ಮುದುಕ, ಮುದುಕಿಯರನ್ನು ಮತ್ತು ಸಣ್ಣ ವಯಸ್ಸಿನಲ್ಲಿ ಮೃತರಾಗುವ ಯುವಕರರನ್ನು ನೋಡುತ್ತೇವೆ ಯಾಕೆ ಹಿಗೆ? ಜೀವನದುದ್ದಕ್ಕೂ ಪರಿಶ್ರಮ ಪಟ್ಟು ಓದಿ ಒಂದು ಸರ್ಕಾರಿ ನೌಕರಿ ತೆಗೆದುಕೋಳ್ಳದೆ ಅಸಫಲರಾದವರನ್ನು ಮತ್ತು ಏನು ಶ್ರಮವಹಿಸದೆ ಕೇವಲ ಹಣ ಮತ್ತು ಅಧಿಕಾರದಿಂದ ಸರ್ಕಾರಿ ನೌಕರಿಯನ್ನು ಕೊಂಡುಕೊಳ್ಳುವುವರನ್ನು ನೋಡುತ್ತೆವೆ ಯಾಕೆ ಹಿಗೆ? ವೃದ್ದಾಪ್ಯದಲ್ಲಿ ದುಡಿಯುವರನ್ನು ಮತ್ತು ಯುವಕರು ಸೋಮಾರಿಗಳಾಗಿ ಕುಳಿತುಕೊಳ್ಳುವುದನ್ನು ನೋಡುತ್ತೆವೆ ಯಾಕೆ ಹೀಗೆ? ಬಡವರು ಬಡವರಾಗಿಯೇ ಉಳಿಯುತ್ತಾರೆ, ಶ್ರೀಮಂತರು ಶ್ರೀಮಂತರಾಗಿಯೆ ಉಳಿಯುತ್ತಾರೆ ಯಾಕೆ ಹೀಗೆ? ಪಾಪಿ ಚಿರಾಯು ಅನ್ನುವಹಾಗೆ ಕೆಟ್ಟ ಮನುಷ್ಯರು ಹೆಚ್ಚು ವರ್ಷ ಬದುಕುಳಿಯುತ್ತಾರೆ, ಪುಣ್ಯವಂತರು ಒಳ್ಳೆಯ ವ್ಯಕ್ತಿಗಳು ಬೇಗನೆ ಮೃತರಾಗುತ್ತಾರೆ ( ಉದಾ: ಬಸವಣ್ಣ, ಸ್ವಾಮಿ ವಿವೇಕಾನಂದ ) ಯಾಕೆ ಹಿಗೆ? ಬ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ಪುರಸ್ಕಾರವಿದೆ, ನಿಯತ್ತಿನಿಂದ ದುಡಿಯುವ ಅಧಿಕಾರಿಗಳ ತರಸ್ಕಾರವಿಯಾಕೆ ಹಿಗೆ? ಬ್ರಷ್ಟಾಚಾರ, ಬಲತ್ಕಾರ, ಅತ್ಯಾಚಾರ, ದೇಶದ್ರೋಹ, ಕೋಲೆ, ಕಳ್ಳತನ ಮಾಡುವುವರಿಗೆ ಸರ್ಕಾರದ ರಕ್ಷಣೆಇದೆ, ಅಸ್ತಿತ್ವಕ್ಕಾಗಿ ಹೋರಾಡುವುವರನ್ನು ಶಿಕ್ಷಿಸುವುದನ್ನು ನೋಡುತ್ತೇವೆ ಯಾಕೆ ಹೀಗೆ? ಇದನ್ನೆಲ್ಲ ನೋಡುತ್ತಿದ್ದರೆ ಶ್ರೀ ಕೃಷ್ಣ ಪರಮಾತ್ಮ ಭಗವತ್ಗೀತೆಯಲ್ಲಿ ಹೇಳಿರುವು ಹಾಗೆ,
” ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”
ಎಂಬ ಮಾತಿನಂತೆ ಯಾವಾಗ ಧರ್ಮವು ಕ್ಷೀಣಿಸುತ್ತದೆಯೋ, [ಅದರ ಸ್ಥಾನದಲ್ಲಿ] ಅಧರ್ಮವು ಹೆಚ್ಚಾಗುತ್ತದೆಯೋ…” ಆಗ ನಾನು ನನ್ನನ್ನು ಸೃಷ್ಟಿಸುತ್ತೇನೆ (ಅವತರಿಸುತ್ತೇನೆ) “ಸಜ್ಜನರ ರಕ್ಷಣೆಗಾಗಿ ಮತ್ತು ದುಷ್ಟರ ವಿನಾಶಕ್ಕಾಗಿ ಧರ್ಮವನ್ನು ಪುನಃ ಸ್ಥಾಪಿಸಲು ನಾನು ಯುಗದಿಂದ ಯುಗಕ್ಕೆ ಅವತರಿಸುತ್ತೇನೆ ಎಂಬ ಮಾತಿನಂತೆ ಅವರಿಸುವವನೆ?
–ಮುಂದುವರೆಯುವುದು……
ಲೇಖಕಕರು- ಶ್ರೀಶೈಲ ಬಿಸಿರೊಟ್ಟಿ
