ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಮಾಜ ಕಲ್ಯಾಣ ಇಲಾಖೆಯು ಭರ್ಜರಿ ಅವಕಾಶ ನೀಡಿದೆ. PM-AJAY ಯೋಜನೆಯಡಿ, KSRTC ಸಹಯೋಗದೊಂದಿಗೆ ಭಾರಿ ವಾಹನ ಚಾಲನಾ (Heavy Vehicle Driving) ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ತರಬೇತಿಯು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಉಚಿತವಾಗಿ ಚಾಲನಾ ಪರವಾನಗಿ (Licence) ಪಡೆಯಲು ಸಹಕಾರಿಯಾಗಲಿದೆ.
SC ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಗುಡ್ ನ್ಯೂಸ್
ತರಬೇತಿಯ ಸೌಲಭ್ಯಗಳು:
ಉಚಿತ ವಸತಿ ಮತ್ತು ಊಟ: ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತದೆ.
ಉಚಿತ ಲೈಸೆನ್ಸ್: ತರಬೇತಿ ಮುಗಿದ ನಂತರ RTO ಮೂಲಕ ಉಚಿತವಾಗಿ ಭಾರಿ ವಾಹನ ಚಾಲನಾ ಪರವಾನಗಿ (Licence) ವಿತರಿಸಲಾಗುವುದು.
ಅವಧಿ: ಈ ತರಬೇತಿಯು ಒಟ್ಟು 30 ದಿನಗಳ ಕಾಲ (ಒಂದು ತಿಂಗಳು) ನಡೆಯಲಿದೆ.
ಅರ್ಹತೆಗಳು ಮತ್ತು ವಯೋಮಿತಿ:
ಜಾತಿ: ಕೇವಲ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಮಾತ್ರ ಈ ಅವಕಾಶವಿರುತ್ತದೆ.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ 45 ವರ್ಷದೊಳಗಿರಬೇಕು.
ತರಬೇತಿ ಕೇಂದ್ರಗಳು:
ಈ ಕೆಳಗಿನ ಸ್ಥಳಗಳಲ್ಲಿ ತರಬೇತಿ ನೀಡಲಾಗುವುದು:
ಮಾಲೂರು
ಮಳವಳ್ಳಿ
ಹಾಸನ
ಚಿಕ್ಕಮಗಳೂರು
ಹೊಳಲ್ಕೆರೆ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಹತ್ತಿರದ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಿನ ಫೋನ್ ನಂಬರ್ಗಳನ್ನು ಸಂಪರ್ಕಿಸಬಹುದು:
7760994432 / 9606037746 / 7760990137 / 7760990533 / 7019072560
24X7 ಸಹಾಯವಾಣಿ: 94823 00400 https://swd.karnataka.gov.in/
ಈ ಪುಟಗಳನ್ನು ಓದಿ..
ಎಸ್ಬಿಐ ಸ್ತ್ರೀ ಶಕ್ತಿ ಯೋಜನೆ: ಸ್ವಂತ ಉದ್ಯೋಗ ಆರಂಭಿಸಲು ಮಹಿಳೆಯರಿಗೆ ₹25 ಲಕ್ಷದವರೆಗೆ ಸಾಲ! 10 ಲಕ್ಷಕ್ಕೆ ಬೇಕಿಲ್ಲ ಯಾವುದೇ ಶ್ಯೂರಿಟಿ
