ಬೆಸ್ಕಾಂ (BESCOM) ನೇಮಕಾತಿ 2026: 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ
ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಸಿಹಿಸುದ್ದಿ ನೀಡಿದೆ. 2025-26ನೇ ಸಾಲಿನ ತರಬೇತಿಗಾಗಿ ಬರೋಬ್ಬರಿ 520 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ. ನೀವು ಬಿ.ಇ (B.E), ಡಿಪ್ಲೊಮಾ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿದ್ದರೆ ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದು.
| ಕ್ರಮ ಸಂಖ್ಯೆ | ಶೈಕ್ಷಣಿಕ ಅರ್ಹತೆ | ಒಟ್ಟು ಹುದ್ದೆಗಳು | ಮಾಸಿಕ ಸ್ಟೈಫಂಡ್ |
| 1 | ಬಿ.ಇ/ಬಿ.ಟೆಕ್ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) | 130 | ₹9,008/- |
| 2 | ಇತರ ಪದವೀಧರರು (BA, BSc, BCom, BBA, BCA ಇತ್ಯಾದಿ) | 315 | ₹9,008/- |
| 3 | ಡಿಪ್ಲೊಮಾ ಹೊಂದಿದವರು (ಎಲ್ಲಾ ವಿಭಾಗ) | 75 | ₹8,000/- |
| ಒಟ್ಟು ಹುದ್ದೆಗಳು | 520 | ತರಬೇತಿ ಅವಧಿ: 1 ವರ್ಷ |
ಅರ್ಹತಾ ಮಾನದಂಡಗಳು:
ರಾಜ್ಯ: ಅಭ್ಯರ್ಥಿಯು ಕಡ್ಡಾಯವಾಗಿ ಕರ್ನಾಟಕ ರಾಜ್ಯದವರಾಗಿರಬೇಕು.
ಭಾಷೆ: ಕನ್ನಡ ಭಾಷೆಯಲ್ಲಿ ಓದಲು ಮತ್ತು ಬರೆಯಲು ಜ್ಞಾನವಿರಬೇಕು.
ಪದವಿ/ಡಿಪ್ಲೊಮಾ: ಜನವರಿ 2021ರ ನಂತರ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು.
ಅನರ್ಹತೆ: ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ ಒಂದು ವರ್ಷದ ಕೆಲಸದ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 12.02.2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.03.2026.
ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 10.03.2026.
ದಾಖಲೆಗಳ ಪರಿಶೀಲನೆ: 23.03.2026 ರಿಂದ 25.03.2026 ರವರೆಗೆ (ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ).
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ವೆಬ್ ಪೋರ್ಟಲ್ https://nats.education.gov.in/ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಪೋರ್ಟಲ್ನಲ್ಲಿ ನೋಂದಾಯಿಸಿದ ನಂತರ “Bangalore Electricity Supply Company Limited” ಎಂದು ಸರ್ಚ್ ಮಾಡಿ ಅಪ್ಲೈ ಮಾಡಬೇಕು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳು ತಮ್ಮ ಪದವಿ ಅಥವಾ ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಇಮೇಲ್ ಐಡಿ ಮೂಲಕ ಮಾಹಿತಿ ನೀಡಲಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ: ಯಾವುದೇ ಗೊಂದಲಗಳಿದ್ದಲ್ಲಿ ಈ ಕೆಳಗಿನ ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸಬಹುದು:
ಇಮೇಲ್: knplacement@boat-srp.com ಅಥವಾ dgmhrd.work@gmail.com.
ಫೋನ್: 080-22356756.
ಅಗತ್ಯ ದಾಖಲೆಗಳು:
ದಾಖಲೆ ಪರಿಶೀಲನೆ ಸಮಯದಲ್ಲಿ ಈ ಕೆಳಗಿನವುಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಪದವಿ ಅಥವಾ ಡಿಪ್ಲೊಮಾ ಅಂಕಪಟ್ಟಿಗಳು.
ಎಸ್.ಎಸ್.ಎಲ್.ಸಿ (SSLC) ಅಂಕಪಟ್ಟಿ.
ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಸೈಜ್ ಫೋಟೋ.
ಜಾತಿ ಮತ್ತು ಆದಾಯ ಪ್ರಮಾಣಪತ್ರ (ಮೀಸಲಾತಿ ಪಡೆಯುವವರಿಗೆ).
Official Notification PDF
ನಮ್ಮ ಸಲಹೆ: ಬೆಸ್ಕಾಂನಂತಹ ಸರ್ಕಾರಿ ಸಂಸ್ಥೆಯಲ್ಲಿ ತರಬೇತಿ ಪಡೆಯುವುದರಿಂದ ನಿಮ್ಮ ವೃತ್ತಿಜೀವನಕ್ಕೆ ದೊಡ್ಡ ಮೌಲ್ಯ ಸಿಗುತ್ತದೆ. ತರಬೇತಿ ಮುಗಿದ ನಂತರ ದೊರೆಯುವ ಪ್ರಮಾಣಪತ್ರವು ಭವಿಷ್ಯದ ಸರ್ಕಾರಿ ಕೆಲಸಗಳಿಗೆ ಸಹಕಾರಿಯಾಗಲಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ಅರ್ಜಿ ಸಲ್ಲಿಸಿ.
ಪಡಿತರ ಚೀಟಿದಾರರೇ ಎಚ್ಚರ! ಉಚಿತ ಅಕ್ಕಿ ಮಾರಾಟ ಮಾಡಿದರೆ ರದ್ದಾಗುತ್ತೆ ರೇಷನ್ ಕಾರ್ಡ್; ಜಾರಿಗೆ ಬಂತು ಹೊಸ ಕಠಿಣ ನಿಯಮ!
