Telegram Join My Telegram WhatsApp Join My WhatsApp

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ: SSP ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನ – ಪೂರ್ಣ ಮಾಹಿತಿ ಇಲ್ಲಿದೆ!

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2026-27ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕಾಗಿ (Scholarship) ನೋಂದಾಯಿತ ಕಾರ್ಮಿಕರ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ನಿಯಮಗಳ ಪ್ರಕಾರ (Rule-45 of Building and Other Construction Workers Karnataka Rules, 2006) ಪ್ರತಿಯೊಬ್ಬ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಧನಸಹಾಯವನ್ನು ನೀಡಲಾಗುತ್ತದೆ.

:ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ: SSP ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನ :

ಪ್ರಮುಖ ದಿನಾಂಕ ಮತ್ತು ಮಾಹಿತಿ:

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2026

  • ಅರ್ಜಿ ಸಲ್ಲಿಸುವ ಪೋರ್ಟಲ್: ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP Portal)

ಅರ್ಜಿ ಸಲ್ಲಿಸಲು ಇರಬೇಕಾದ ಕಡ್ಡಾಯ ಅರ್ಹತೆಗಳು ಹಾಗೂ ನಿಯಮಗಳು:

  1. E-Card ಕಡ್ಡಾಯ: 2026-27ನೇ ಸಾಲಿನಲ್ಲಿ SSP ಮೂಲಕ ಅರ್ಜಿ ಸಲ್ಲಿಸುವ ಮೊದಲು, ಕಾರ್ಮಿಕರು ಮಂಡಳಿಯ ಕಾರ್ಮಿಕ ಸೇವಾ ಕೇಂದ್ರ ತಂತ್ರಾಂಶದ ಮೂಲಕ E-card ಅನ್ನು ಪಡೆಯುವುದು ಕಡ್ಡಾಯವಾಗಿದೆ.

    • E-card ಪಡೆಯಲು ಮಂಡಳಿಯ ಅಧಿಕೃತ ವೆಬ್‌ಸೈಟ್: https://kbocwwb.karnataka.gov.in ಗೆ ಭೇಟಿ ನೀಡಿ.

    • ನಿಮ್ಮ ನೋಂದಣಿ ಸಂಖ್ಯೆ ಮತ್ತು ಉಲ್ಲೇಖ ಸಂಖ್ಯೆಯನ್ನು (ಸೇವಾ ಸಿಂಧು ಕಾರ್ಡ್‌ನಲ್ಲಿರುವಂತೆ) ನಮೂದಿಸಿ E-card ಡೌನ್‌ಲೋಡ್ ಮಾಡಿಕೊಳ್ಳಬಹುದು.

  2. ಆಧಾರ್ ಹಾಗೂ NPCI ಮ್ಯಾಪಿಂಗ್ ಕಡ್ಡಾಯ:

    • ಎಲ್ಲ ನೋಂದಾಯಿತ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ (ಜೋಡಣೆ) ಮಾಡಿರಬೇಕು.

    • ನಂತರ ಆ ಆಧಾರ್ ಸಂಖ್ಯೆಗೆ NPCI Mapping ಮಾಡಿಸುವುದು ಕಡ್ಡಾಯವಾಗಿರುತ್ತದೆ.

    • ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗದಿದ್ದರೆ ಶೈಕ್ಷಣಿಕ ಧನಸಹಾಯದ ಹಣ ಜಮೆಯಾಗುವುದಿಲ್ಲ.

ಸೂಚನೆ: ಅರ್ಹ ಫಲಾನುಭವಿಗಳು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಬ್ಯಾಂಕ್‌ಗೆ ಭೇಟಿ ನೀಡಿ NPCI ಮ್ಯಾಪಿಂಗ್ ಪೂರ್ಣಗೊಳಿಸಿ, SSP ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ವಿವರ (Scholarship Amount Table)

ಕ್ರ. ಸಂ.ಶೈಕ್ಷಣಿಕ ಕೋರ್ಸ್ ಅಥವಾ ತರಗತಿ / ದರ್ಜೆಯ ಹೆಸರುವಾರ್ಷಿಕ ಶೈಕ್ಷಣಿಕ ಸಹಾಯಧನ ಮೊತ್ತ (ರೂ.ಗಳಲ್ಲಿ)ಸ್ನಾತಕೋತ್ತರ ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ)
11ನೇ ತರಗತಿಯಿಂದ 5ನೇ ತರಗತಿ₹ 1,800/-
26ನೇ ತರಗತಿಯಿಂದ 8ನೇ ತರಗತಿ₹ 2,400/-
39ನೇ ತರಗತಿಯಿಂದ 10ನೇ ತರಗತಿ₹ 3,000/-
4ಪಿಯುಸಿ, 11 ಹಾಗೂ 12ನೇ ತರಗತಿ ಅಥವಾ ತತ್ಸಮಾನ ಕೋರ್ಸ್₹ 6,000/-
510ನೇ ತರಗತಿ ನಂತರದ ಐಟಿಐ / ತತ್ಸಮಾನ ತಾಂತ್ರಿಕ ಕೋರ್ಸ್‌ಗಳು₹ 10,000/-
6ಪಿಯುಸಿ ನಂತರದ ಯಾವುದೇ ಡಿಪ್ಲೊಮಾ ತರಗತಿ₹ 12,000/-
7ಸಾಮಾನ್ಯ ಪದವಿ (ಜನರಲ್ ಡಿಗ್ರಿ) – ಬಿ.ಎ, ಬಿ.ಕಾಂ, ಬಿ.ಎಸ್‌ಸಿ ಮುಂತಾದವುಗಳು₹ 15,000/-₹ 20,000/-
803 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ Vocational ವೃತ್ತಿಪರ ಕೋರ್ಸ್‌ಗಳು (ಕಾನೂನು ಪದವಿ ಸಹಿತ)₹ 20,000/-₹ 25,000/-
903 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ತಾಂತ್ರಿಕ ವೃತ್ತಿಪರ ಕೋರ್ಸ್‌ಗಳು (Professional Courses)₹ 25,000/-₹ 35,000/-
1003 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಅರೆ ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳು (ಪ್ಯಾರಾ ಮೆಡಿಕಲ್ ಕೋರ್ಸ್)₹ 20,000/-₹ 25,000/-
1103 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳು (Professional Courses)₹ 25,000/-₹ 35,000/-
12ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಸಮನಾದ ಕಾನೂನು ವಿದ್ಯಾ ಸಂಸ್ಥೆಗಳು₹ 40,000/-₹ 50,000/-
13ಪಿಹೆಚ್‌ಡಿ / ಎಮ್. ಫಿಲ್ (ಗರಿಷ್ಠ ಮೂರು ವರ್ಷ ಅವಧಿಗೆ)₹ 40,000/-
14IIT, IIIT, AIIMS, IISc, IISERC ನಂತಹ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾಸಂಸ್ಥೆಗಳು₹ 50,000/-₹ 60,000/-
ಈ ಪುಟಗಳನ್ನು ಓದಿ……..

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ರಿಲೀಫ್: ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ! ಟಾಟಾ ಕಂಪನಿ ಅರ್ಜಿ ವಾಪಸ್

Leave a Comment