ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಇದ್ದ ಗೊಂದಲಗಳಿಗೆ ಬೆಸ್ಕಾಂ (BESCOM) ತೆರೆ ಎಳೆದಿದೆ. ಗೃಹಜ್ಯೋತಿ ಯೋಜನೆಯ ಮಾಹಿತಿ ಸಮೀಕ್ಷೆಯ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಜಾತಿ ಪ್ರಮಾಣಪತ್ರ ಅಥವಾ ಪ್ರವರ್ಗದ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಲಾಗಿದೆ.
ಬೆಸ್ಕಾಮ್ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸೇವಾ ಸಿಂಧು ಆಪ್ ಮೂಲಕ ಮಾಹಿತಿ ಕಲೆಹಾಕುತ್ತಿದ್ದು, ಒಂದು ವೇಳೆ ಫಲಾನುಭವಿಗಳು ಜಾತಿ ವಿವರ ನೀಡಲು ಇಷ್ಟಪಡದಿದ್ದರೆ ಆಪ್‌ನಲ್ಲಿರುವ ‘ಮಾಹಿತಿ ನೀಡಲು ನಿರಾಕರಣೆ’ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ರಿಲೀಫ್: ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ! ಟಾಟಾ ಕಂಪನಿ ಅರ್ಜಿ ವಾಪಸ್
ಈ ತಿಂಗಳು ನಿಯಮಿತ ‘ಮೀಟರ್ ರೀಡಿಂಗ್’ ಇರುವುದಿಲ್ಲ!
ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನಾ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳನ್ನು ನಿಯೋಜಿಸಿರುವುದರಿಂದ, ಪ್ರಸ್ತುತ ತಿಂಗಳು ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ.
ಸರಾಸರಿ ಬಿಲ್ಲಿಂಗ್: ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಿ SMS ಮತ್ತು ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.
ಯಾರಿಗೆ ವಿನಾಯಿತಿ ಇಲ್ಲ?: ಎಚ್‌ಟಿ (HT) ಗ್ರಾಹಕರು, 40 ಎಚ್‌ಪಿಗಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್‌ಟಿ ಗ್ರಾಹಕರು ಮತ್ತು ಸೋಲಾರ್ ರೂಫ್‌ಟಾಪ್ ಹೊಂದಿರುವವರಿಗೆ ಎಂದಿನಂತೆ ನೈಜ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುತ್ತದೆ.
ಆಗಸ್ಟ್‌ನಿಂದ ಯಥಾಪ್ರಕಾರ: ಆಗಸ್ಟ್ ತಿಂಗಳಿನಿಂದ ಎಂದಿನಂತೆ ರೆಗ್ಯುಲರ್ ಮೀಟರ್ ರೀಡಿಂಗ್ ಆರಂಭವಾಗಲಿದ್ದು, ಸರಾಸರಿ ಬಿಲ್ಲಿಂಗ್‌ನಲ್ಲಿ ವ್ಯತ್ಯಾಸವಿದ್ದರೆ ಮುಂದಿನ ಬಿಲ್‌ನಲ್ಲಿ ಹೊಂದಾಣಿಕೆ (Adjustment) ಮಾಡಲಾಗುತ್ತದೆ.
ವಿದ್ಯುತ್ ಖಾಸಗೀಕರಣಕ್ಕೆ ಬ್ರೇಕ್: ಅರ್ಜಿ ಹಿಂಪಡೆದ ಟಾಟಾ ಪವರ್!
ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ (TPCIL) ಅಧಿಕೃತವಾಗಿ ವಾಪಸ್ ಪಡೆದಿದೆ.
ವಿದ್ಯುತ್ ವಿತರಣೆಯ ಖಾಸಗೀಕರಣವನ್ನು ವಿರೋಧಿಸಿ ಎಸ್ಕಾಂಗಳ ಸಿಬ್ಬಂದಿ, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಆಯೋಗಕ್ಕೆ 22 ಲಕ್ಷಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇದರ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಖಾಸಗೀಕರಣಗೊಳಿಸದ ಇರಲು ತೀರ್ಮಾನಿಸಲಾಗಿತ್ತು. ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಟಾಟಾ ಕಂಪನಿ ಹಿಂದೆ ಸರಿದಿದ್ದು, ಇದನ್ನು ವಿವಿಧ ನೌಕರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ. ಬಲರಾಮ್ ಮತ್ತು ಸಿ. ರಮೇಶ್ ಅವರು ಸ್ವಾಗತಿಸಿದ್ದು, “ಇದು ಹೋರಾಟಕ್ಕೆ ಸಿಕ್ಕ ಜಯ” ಎಂದು ಬಣ್ಣಿಸಿದ್ದಾರೆ.
ಈ ಪುಟಗಳನ್ನು ಓದಿ……..
ಬಿಸಿಎಂ ಹಾಸ್ಟೆಲ್ ಪ್ರವೇಶಾತಿ ಆರಂಭ: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ದಾಖಲಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಕಾರ್ಮಿಕರಿಗೆ ಭರ್ಜರಿ ಸಿಹಿ ಸುದ್ದಿ: ವಿವಿಧ ಉದ್ಯಮಗಳ ಕನಿಷ್ಠ ವೇತನ ಪರಿಷ್ಕರಿಸಿ ಕರ್ನಾಟಕ ಸರ್ಕಾರ ಆದೇಶ!
ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ಸಾರ್ವಜನಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿಗೆ ಹೊಸದಾಗಿ “ಪ್ರಜಾಸೇವಾ ಇಲಾಖೆ” ಸ್ಥಾಪನೆ!
