ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡಲು ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹಾಗೂ ‘ಸಕಾಲ ಮಿಷನ್’ ಇಲಾಖೆಗಳನ್ನು ಸಂಯೋಜಿಸಿ ಹೊಸದಾಗಿ “ಪ್ರಜಾಸೇವಾ ಇಲಾಖೆ” ಯನ್ನು ಸ್ಥಾಪಿಸಿ ಸರ್ಕಾರ ಆದೇಶಿಸಿದೆ.
ಸಚಿವ ಸಂಪುಟದ ತೀರ್ಮಾನದಂತೆ ಜೂನ್ 24, 2026 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಗಾಯತ್ರಿ ಜಿ.ಎನ್. ಅವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
ಹೊಸ ಇಲಾಖೆಯ ಮುಖ್ಯ ಉದ್ದೇಶಗಳು:
ಸಂಯೋಜಿತ ವ್ಯವಸ್ಥೆ: ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು ಉಸ್ತುವಾರಿಯನ್ನು ಏಕೀಕೃತ ಮಾದರಿಯಲ್ಲಿ ತರುವುದು.
ಕಾಲಮಿತಿಯ ಪರಿಹಾರ: ‘ಜನಸ್ಪಂದನ’ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ನಾಗರಿಕರ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಬಗೆಹರಿಸುವುದು.
ಸರಳೀಕರಣ: ಆಡಳಿತದಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಹಾಲಿ ಇರುವ ಕಾರ್ಯವಿಧಾನಗಳ ಮರುವಿನ್ಯಾಸ ಮಾಡುವುದು.
ಪ್ರಜಾಸೇವಾ ಇಲಾಖೆಗೆ ಮರುಹೊಂದಾಣಿಕೆಯಾದ ಪ್ರಮುಖ ಹುದ್ದೆಗಳ ವಿವರ:
ಹೊಸ ಇಲಾಖೆಯ ಸುಗಮ ಕಾರ್ಯನಿರ್ವಹಣೆಗಾಗಿ ವಿವಿಧ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಒಟ್ಟು 73 ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಜಿಸಲಾಗಿದೆ. ಅವುಗಳ ವಿವರ ಇಲ್ಲಿದೆ:
| ಕ್ರ.ಸಂ. | ಹುದ್ದೆಯ ಹೆಸರು | ಮಂಜೂರಾದ ಒಟ್ಟು ಹುದ್ದೆಗಳು |
| 1 | ಸರ್ಕಾರದ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು | 01 |
| 2 | ಅಪರ ಮಿಷನ್ ನಿರ್ದೇಶಕರು (ಅಪರ/ಜಂಟಿ ಕಾರ್ಯದರ್ಶಿ) | 02 |
| 3 | ಸರ್ಕಾರದ ಉಪ ಕಾರ್ಯದರ್ಶಿ | 01 |
| 4 | ಸರ್ಕಾರದ ಅಧೀನ ಕಾರ್ಯದರ್ಶಿ | 04 |
| 5 | ಶಾಖಾಧಿಕಾರಿ | 07 |
| 6 | ಹಿರಿಯ ಸಹಾಯಕರು / ಸಹಾಯಕರು / ಕಿರಿಯ ಸಹಾಯಕರು | 32 |
| 7 | ಶೀಘ್ರಲಿಪಿಗಾರರು / ದತ್ತಾಂಶ ನಮೂದು ಸಹಾಯಕರು | 10 |
| 8 | ವಾಹನ ಚಾಲಕರು ಮತ್ತು ಗ್ರೂಪ್ ‘ಡಿ’ ನೌಕರರು | 13 |
| ಒಟ್ಟು ಹುದ್ದೆಗಳು | 73 |
ಇದರ ಜೊತೆಗೆ ಇಲಾಖೆಯ ತಾಂತ್ರಿಕ ಮತ್ತು ಕಚೇರಿ ನಿರ್ವಹಣೆಗಾಗಿ ಒಟ್ಟು 48 ಹುದ್ದೆಗಳನ್ನು ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಹಣಕಾಸು ಇಲಾಖೆ ಸಮ್ಮತಿಸಿದೆ. ಇದರಲ್ಲಿ 32 ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರು ಮತ್ತು 5 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು ಸೇರಿವೆ.
ಈ ಪುಟಗಳನ್ನು ಓದಿ……..
ಬಿಸಿಎಂ ಹಾಸ್ಟೆಲ್ ಪ್ರವೇಶಾತಿ ಆರಂಭ: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ದಾಖಲಾತಿಗೆ ಆನ್ಲೈನ್ ಅರ್ಜಿ ಆಹ್ವಾನ
