ಬೆಂಗಳೂರು: 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಏಪ್ರಿಲ್ 23 ಮತ್ತು 24 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು (Admission Ticket) ಇಂದು ಬಿಡುಗಡೆ ಮಾಡಲಾಗಿದೆ
ಪರೀಕ್ಷಾ ವೇಳಾಪಟ್ಟಿ:
ಕನ್ನಡ ಭಾಷೆ ಪರೀಕ್ಷೆ: 22-04-2026 (ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ).
ಸಿಇಟಿ ಮುಖ್ಯ ಪರೀಕ್ಷೆ: 23-04-2026 ಮತ್ತು 24-04-2026
ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ ಮೂಲಕ ಈ ಕೆಳಗಿನ ಹಂತಗಳನ್ನು ಅನುಸರಿಸಿ ಹಾಲ್ ಟಿಕೆಟ್ ಪಡೆಯಬಹುದು
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://cetonline.karnataka.gov.in/kea/.
ಲಾಗಿನ್ ವಿವರ ನೀಡಿ: ನಿಮ್ಮ ಪಾಸವರ್ಡ್ ಮತ್ತು ಕ್ಯಾಪ್ಚಾ (CAPTCHA) ಕೋಡ್ ನಮೂದಿಸಿ.
ಓಟಿಪಿ ಪರಿಶೀಲನೆ: ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ (OTP) ನಮೂದಿಸಿ ಲಾಗಿನ್ ಆಗಿ.
ಮಾಹಿತಿ ದಾಖಲಿಸಿ: ನಿಮ್ಮ 2ನೇ ಪಿಯುಸಿ ಅಥವಾ 12ನೇ ತರಗತಿಯ ಬೋರ್ಡ್ ಹೆಸರು, ನೋಂದಣಿ ಸಂಖ್ಯೆ ಮತ್ತು ತೇರ್ಗಡೆಯಾದ ವರ್ಷವನ್ನು ನಮೂದಿಸಿ.
ಡೌನ್ಲೋಡ್ ಮಾಡಿ: ವಿವರಗಳನ್ನು ಸಲ್ಲಿಸಿದ ನಂತರ ನಿಮ್ಮ ಪ್ರವೇಶ ಪತ್ರ ಪರದೆಯ ಮೇಲೆ ಕಾಣಿಸುತ್ತದೆ, ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು:
ವಿವರಗಳನ್ನು ಪರಿಶೀಲಿಸಿ: ಪ್ರವೇಶ ಪತ್ರದಲ್ಲಿರುವ ನಿಮ್ಮ ಹೆಸರು, ಪರೀಕ್ಷಾ ಕೇಂದ್ರ ಮತ್ತು ಸಮಯವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.
ಮಾರ್ಗದರ್ಶಿಗಳ ಪಾಲನೆ: ಪ್ರವೇಶ ಪತ್ರದ ಜೊತೆಗೆ ನೀಡಿರುವ ಪರೀಕ್ಷಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಕಡ್ಡಾಯವಾಗಿ ಓದಿ ಅನುಸರಿಸಿ.
ಕನ್ನಡ ಪರೀಕ್ಷಾ ಕೇಂದ್ರಗಳು: ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.
ಸಹಾಯವಾಣಿ ಮಾಹಿತಿ:
ಯಾವುದೇ ಸಮಸ್ಯೆಗಳಿದ್ದಲ್ಲಿ ಅಭ್ಯರ್ಥಿಗಳು ಕೆಇಎ ಸಹಾಯವಾಣಿಯನ್ನು ಸಂಪರ್ಕಿಸಬಹುದು:
ದೂರವಾಣಿ: 080-23 460 460
ಇಮೇಲ್: keauthority-ka@nic.in
ಈ ಪುಟಗಳನ್ನು ಓದಿ……
