ವಿಜಯಪುರದ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರಗಳು
ಶೈಕ್ಷಣಿಕ ಅರ್ಹತೆ
ಕಿರಿಯ ಸಹಾಯಕರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 70% ಅಂಕಗಳೊಂದಿಗೆ ಬಿ.ಕಾಂ (B.Com) / ಬಿ.ಎಸ್ಸಿ (B.Sc) / ಬಿ.ಸಿ.ಎ (BCA) / ಬಿ.ಬಿ.ಎ (BBA) ಅಥವಾ ಬಿ.ಇ ಇನ್ ಸಿ.ಎಸ್ (BE in CS) ಪದವಿ ಹೊಂದಿರಬೇಕು. ಸ್ನಾತಕೋತ್ತರ ಪದವಿ ಹಾಗೂ ಕಂಪ್ಯೂಟರ್ ಜ್ಞಾನವಿದ್ದವರಿಗೆ ಆದ್ಯತೆ ನೀಡಲಾಗುವುದು.
ಸಿಪಾಯಿ / ವಾಹನ ಚಾಲಕರು: ಎಸ್ಎಸ್ಎಲ್ಸಿ (SSLC) ಪಾಸಾಗಿರಬೇಕು ಅಥವಾ ಫೇಲ್ ಆಗಿರಬಹುದು. ಚಾಲಕ ಹುದ್ದೆಗೆ ಚಾಲನಾ ಪರವಾನಗಿ (Driving License) ಕಡ್ಡಾಯ.
ವಯೋಮಿತಿ (ಕನಿಷ್ಠ 18 ವರ್ಷ ತುಂಬಿರಬೇಕು)
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ: 40 ವರ್ಷಗಳು
ಇತರೆ ಹಿಂದುಳಿದ ವರ್ಗಗಳು: 38 ವರ್ಷಗಳು
ಸಾಮಾನ್ಯ ವರ್ಗ: 35 ವರ್ಷಗಳು
ಅರ್ಜಿ ಶುಲ್ಕ
ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ: ರೂ. 1000/-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ: ರೂ. 500/-
ಸೂಚನೆ: ಶುಲ್ಕವನ್ನು ಡಿ.ಡಿ (D.D) ಮೂಲಕ “ವ್ಯವಸ್ಥಾಪಕರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ” ಹೆಸರಿನಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅರ್ಜಿಯನ್ನು ಬ್ಯಾಂಕಿನ ಅಧಿಕೃತ ವೆಬ್ಸೈಟ್ ಅಥವಾ ಪ್ರಧಾನ ಕಚೇರಿಯಿಂದ (ಬೆಳಿಗ್ಗೆ 10:30 ರಿಂದ ಸಂಜೆ 4:30 ರವರೆಗೆ) ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಂಕಪಟ್ಟಿಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಲಗತ್ತಿಸಬೇಕು.
ಭರ್ತಿ ಮಾಡಿದ ಅರ್ಜಿಯನ್ನು 06-03-2026 ರ ಸಂಜೆ 4:30 ರ ಒಳಗಾಗಿ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
ವಿಳಾಸ: ಪ್ರಧಾನ ವ್ಯವಸ್ಥಾಪಕರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ಮೀನಾಕ್ಷಿ ಚೌಕ್, ಮಿರದೆ ಗಲ್ಲಿ, ವಿಜಯಪುರ – 586101.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಮಾರ್ಚ್ 2026
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವೆಬ್ಸೈಟ್: www.cmsbank.in
ಫೋನ್ ಸಂಖ್ಯೆ: 08352-255067
ಇಮೇಲ್: chaitanya255067@gmail.com
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ 24,300 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್! ಆರ್ಥಿಕ ಇಲಾಖೆಯಿಂದ ಅಧಿಕೃತ ಮಂಜೂರಾತಿ.
