ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಯನ್ನು ಹಮ್ಮಿಕೊಂಡಿದೆ.
ಅಲ್ಪಸಂಖ್ಯಾತ ನಿರ್ದೇಶನಾಲಯ ಮತ್ತು ಕೆ.ಎಸ್.ಆರ್.ಟಿ.ಸಿ (KSRTC) ಸಹಯೋಗದೊಂದಿಗೆ ಈ ತರಬೇತಿ ನಡೆಯಲಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಆರ್ಟಿಒ (RTO) ಮೂಲಕ ಉಚಿತವಾಗಿ ಚಾಲನಾ ಪರವಾನಗಿ (License) ನೀಡಲಾಗುವುದು
ಸರ್ಕಾರದಿಂದ ಉಚಿತ ಡ್ರೈವಿಂಗ್ ಟ್ರೈನಿಂಗ್ ಜೊತೆಗೆ ಲೈಸೆನ್ಸ್!
ಯಾರೆಲ್ಲ ಅರ್ಜಿ ಸಲ್ಲಿಸಬಹುದು? (Eligibility):
ಸಮುದಾಯ: ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಹಾಗೂ ಪಾರ್ಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ: 18 ರಿಂದ 45 ವರ್ಷದೊಳಗಿರಬೇಕು.
ವಿದ್ಯಾರ್ಹತೆ: ಕನಿಷ್ಠ ಎಸ್.ಎಸ್.ಎಲ್.ಸಿ (SSLC) ಉತ್ತೀರ್ಣರಾಗಿರಬೇಕು.
ತರಬೇತಿಯ ಸೌಲಭ್ಯಗಳು:
ಒಂದು ತಿಂಗಳ ಕಾಲ ಉಚಿತ ತರಬೇತಿ.
ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.
ತರಬೇತಿ ನಂತರ ಉಚಿತ ಡ್ರೈವಿಂಗ್ ಲೈಸೆನ್ಸ್ ವಿತರಣೆ.
ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತರು ಆನ್ಲೈನ್ ಮೂಲಕ ksrtcjobs.karnataka.gov.in ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಹತ್ತಿರದ ಕೆ.ಎಸ್.ಆರ್.ಟಿ.ಸಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ತರಬೇತಿಯು 23/03/2026 ರಿಂದ ಪ್ರಾರಂಭವಾಗುವ ಉದ್ದೇಶವಿದೆ.
ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ: ಹಾಲ್ಟಿಕೆಟ್ ಡೌನ್ಲೋಡ್
