ಮೋಸ್ಕೋ: ಪ್ರಕೃತಿಯು ಯಾವಾಗಲೂ ತನ್ನದೇ ಆದ ವಿಸ್ಮಯಗಳಿಂದ ಮನುಷ್ಯನನ್ನು ಬೆರಗುಗೊಳಿಸುತ್ತದೆ. ಇತ್ತೀಚೆಗೆ ರಷ್ಯಾದ ಆಕಾಶದಲ್ಲಿ ಅಂತಹದ್ದೇ ಒಂದು ಅದ್ಭುತ ದೃಶ್ಯ ಕಂಡುಬಂದಿದ್ದು, ಜನರು ದಿಗಿಲುಗೊಂಡಿದ್ದಾರೆ. ಸಾಮಾನ್ಯವಾಗಿ ರಾತ್ರಿ ಆಕಾಶದಲ್ಲಿ ನಮಗೆ ಒಂದೇ ಚಂದ್ರ ಕಾಣಿಸುತ್ತಾನೆ.ಆದರೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಏಕಕಾಲಕ್ಕೆ ನಾಲ್ಕು ಚಂದ್ರರು ಕಾಣಿಸಿಕೊಂಡು ಹೊಸ ಕೌತುಕ ಮೂಡಿಸಿದ್ದಾರೆ
ನಡೆದಿದ್ದೇನು? ವಿಸ್ಮಯ! ಆಕಾಶದಲ್ಲಿ ಒಂದಲ್ಲ, ಎರಡಲ್ಲ.. ಏಕಕಾಲಕ್ಕೆ ಕಂಡವು 4 ಚಂದಿರ!
ಸೇಂಟ್ ಪೀಟರ್ಸ್‌ಬರ್ಗ್‌ನ ಆಕಾಶದಲ್ಲಿ ನಾಲ್ಕು ಚಂದ್ರರು ಒಟ್ಟಾಗಿ ಪ್ರಕಾಶಿಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇದನ್ನು ನೋಡಿದ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದು, ಇದೇನಾದರೂ ಗ್ರಹಗಳ ಬದಲಾವಣೆಯೇ ಅಥವಾ ಪ್ರಳಯದ ಸೂಚನೆಯೇ ಎಂಬ ಚರ್ಚೆಗಳು ಆರಂಭವಾಗಿದ್ದವು.
ಜ್ಞಾನ ಏನು ಹೇಳುತ್ತದೆ?
ವಿಜ್ಞಾನಿಗಳ ಪ್ರಕಾರ, ಇದು ಯಾವುದೇ ಅಲೌಕಿಕ ವಿದ್ಯಮಾನವಲ್ಲ, ಬದಲಿಗೆ ಇದೊಂದು ನೈಸರ್ಗಿಕ ಪ್ರಕ್ರಿಯೆ. ಇದಕ್ಕೆ ವಿಜ್ಞಾನದ ಭಾಷೆಯಲ್ಲಿ “ಪ್ಯಾರಸೇಲಿನ್” (Paraseline) ಎಂದು ಕರೆಯಲಾಗುತ್ತದೆ
