ಬೆಂಗಳೂರು: ಸರ್ಕಾರಿ ಪಿಂಚಣಿದಾರರು ಹಾಗೂ ಕುಟುಂಬಕ್ಕೆ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆ ಜಾರಿಗೆ ಸಚಿವ ಸಂಪುಟ ಅಸ್ತು! ರಾಜ್ಯ ಸರ್ಕಾರಿ ಪಿಂಚಣಿದಾರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.ಈ ಯೋಜನೆಯಿಂದ ಸುಮಾರು 4.93 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ನಗದು ರಹಿತವಾಗಿ ಉತ್ತಮ ಚಿಕಿತ್ಸೆ ಪಡೆಯಲು ಹಾದಿ ಸುಗಮವಾಗಿದೆ.
ಸರ್ಕಾರಿ ಪಿಂಚಣಿದಾರರು ಹಾಗೂ ಕುಟುಂಬಕ್ಕೆ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆ ಜಾರಿಗೆ ಸಚಿವ ಸಂಪುಟ ಅಸ್ತು! ಯೋಜನೆಯ ಪ್ರಮುಖ ವಿವರಗಳು:
ಅರ್ಹ ಫಲಾನುಭವಿಗಳು: ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅವರನ್ನೇ ಅವಲಂಬಿಸಿರುವ ದಿವ್ಯಾಂಗ ಮಕ್ಕಳು. ಯೋಜನೆ ವ್ಯಾಪ್ತಿಯಲ್ಲಿ 70 ವರ್ಷದೊಳಗಿನ 3.11 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 4.93 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ.
ಆರೋಗ್ಯ ವಿಮೆ ಮಿತಿ: ‘ಸಂಧ್ಯಾ ಕಿರಣ’ ಯೋಜನೆಯಡಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರೆಯಲಿದೆ.
ಯಾವೆಲ್ಲಾ ಚಿಕಿತ್ಸೆಗಳು ಲಭ್ಯ? ದ್ವಿತೀಯ ಹಂತದ ಚಿಕಿತ್ಸೆ, ತೃತೀಯ ಹಂತದ ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ.
ಚಿಕಿತ್ಸೆ ಎಲ್ಲಿ ಲಭ್ಯ? ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆ ಅಡಿಯಲ್ಲಿ ನೋಂದಾಯಿತ ಅಥವಾ ಅನುಮೋದಿತ ಆಸ್ಪತ್ರೆಗಳಲ್ಲಿ ನಿಗದಿಪಡಿಸಿದ ಚಿಕಿತ್ಸಾ ಪ್ಯಾಕೇಜ್ ದರಗಳಲ್ಲೇ ಫಲಾನುಭವಿಗಳು ಚಿಕಿತ್ಸೆ ಪಡೆಯಬಹುದು.
ವಂತೀಗೆ ಆಧಾರಿತ ಯೋಜನೆ (Contribution Pattern):
ಈ ಯೋಜನೆಯು ವಂತಿಗೆ ಆಧಾರಿತವಾಗಿದ್ದು, ಚಿಕಿತ್ಸಾ ವೆಚ್ಚವನ್ನು ಫಲಾನುಭವಿಗಳು ಮತ್ತು ಸರ್ಕಾರ ಹಂಚಿಕೊಳ್ಳಲಿವೆ.
ಸೇವಾ ಪಿಂಚಣಿದಾರರು: ತಮ್ಮ ಮೂಲ ಪಿಂಚಣಿಯ 1.25% ನಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡಬೇಕು.
ಕುಟುಂಬ ಪಿಂಚಣಿದಾರರು: ತಮ್ಮ ಮೂಲ ಕುಟುಂಬ ಪಿಂಚಣಿಯ 0.75% ನಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ.
ವೆಚ್ಚ ಹಂಚಿಕೆ: ಚಿಕಿತ್ಸಾ ವೆಚ್ಚದಲ್ಲಿ 70% ಮೊತ್ತವನ್ನು ಫಲಾನುಭವಿಗಳ ವಂತಿಗೆಯಿಂದ ಹಾಗೂ 30% ಮೊತ್ತವನ್ನು ರಾಜ್ಯ ಸರ್ಕಾರದ ಪಾಲಿ ನಿಂದ ಭರಿಸಲಾಗುತ್ತದೆ.
ಸಂಕ್ಷಿಪ್ತ ಮಾಹಿತಿ (Quick Summary):
ಯೋಜನೆ: ಸಂಧ್ಯಾ ಕಿರಣ ನಗದು ರಹಿತ ಆರೋಗ್ಯ ಯೋಜನೆ
ಫಲಾನುಭವಿಗಳು: ರಾಜ್ಯ ಸರ್ಕಾರಿ ಪಿಂಚಣಿದಾರರು & ಕುಟುಂಬ
ವಾರ್ಷಿಕ ಚಿಕಿತ್ಸಾ ಮಿತಿ: ₹5 ಲಕ್ಷದವರೆಗೆ (ನಗದು ರಹಿತ)
ಒಟ್ಟು ಫಲಾನುಭವಿಗಳು: 4.93 ಲಕ್ಷ ಜನ
ಈ ಪುಟಗಳನ್ನು ಓದಿ…….
ಅಮೆರಿಕದಲ್ಲಿ ಆಗಸ್ಟ್ 15 ‘ಭಾರತ ದಿನ’: ಡೆಲಾವೇರ್, ನ್ಯೂಯಾರ್ಕ್ ರಾಜ್ಯಗಳಿಂದ ವಿಶೇಷ ಘೋಷಣೆ
ವೇತನ ಪರಿಷ್ಕರಣೆ: ಮರುಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಲು ಸರ್ಕಾರದ ನಿರ್ಧಾರ!
